World environment day 2025

ದಿನಾಂಕ 5.6.2025 ರಂದು ಸರ್ಕಾರಿ ಪ್ರೌಢಶಾಲೆ ತೊಡೂರು ಇಲ್ಲಿ ಶಾಲೆಯ ಮೇಧಾ ಪಾಟ್ಕರ್ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಲೆ ಆವರಣದಲ್ಲಿ ತೆಂಗು , ಲಿಂಬೆ, ಅಡಿಕೆ ವಿವಿಧ ಜಾತಿಯ ಹೂವಿನ ಗಿಡಗಳು ಹಾಗೂ ಕಾಡು ಜಾತಿಯ ಸಸಿಗಳನ್ನು ನೆಡಲಾಯಿತು." ಏಕ್ ಪೇಡ್ ಮಾ ಕೆ ನಾಮ್" ಎಂಬ ಘೋಷ ವಾಕ್ಯದಡಿ ಪ್ರತಿಯೊಬ್ಬ ವಿದ್ಯಾರ್ಥಿಯು ತಲಾ ಒಂದೊಂದು ಸಸಿಯನ್ನು ನೆಟ್ಟು ಅದನ್ನು ಪೋಷಿಸುವ ಪ್ರತಿಜ್ಞೆಗೈದರು.

Comments